Tuesday, 13 November 2012

ಹೀಗೂ ಒಬ್ಬ ಡಾ|| ರಾಜಕುಮಾರ್ ಅಭಿಮಾನಿ

ಬೆಳಗಾವಿ ಜಿಲ್ಲೆ, ಹುಕ್ಕೇರಿ ತಾಲ್ಲೂಕು, ಮಣಗುತ್ತಿ ಗ್ರಾಮದಲ್ಲಿ 
ಶ್ರೀ ಶಾಂತವೀರಯ್ಯ ಗುರುಲಿಂಗಯ್ಯ ಹಾಲದೇವರಮಠ 
ಶ್ರೀಮತಿ ಮಹಾದೇವಿ ಶಾಂತವೀರಯ್ಯ ಹಾಲದೇವರಮಠ 
ಈ ದಂಪತಿಗಳ ಸುಪುತ್ರರಾದ 
ಚಿ|| ನಿಜಲಿಂಗಯ್ಯ  ಎಸ್. ಹೆಚ್. (ರಾಜಸುತ), ರಾಯಚೂರು ಜಿಲ್ಲೆ, ಲಿಂಗಸಗೂರು ತಾಲ್ಲೂಕು, ಕಮಲದಿನ್ನಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇವರು ವರನಟ ಡಾ|| ರಾಜ್ ಕುಮಾರರವರನ್ನು ಅವರ ವ್ಯಕ್ತಿತ್ವವನ್ನು ಅವರ  ಆದರ್ಶವನ್ನು ತಮ್ಮ ಜೀವನದಲ್ಲಿ ಆಳವಡಿಸಿಕೊಂಡು ಸಾರ್ಥಕ ಜೀವನವನ್ನು ಸಾಗಿಸುತ್ತಿದ್ದಾರೆ.

ಶ್ರೀಯುತರು ತಮ್ಮ ವಿವಾಹದ ಸಂದರ್ಭದಲ್ಲಿ ತಮ್ಮ ವಿವಾಹದ ಆಮಂತ್ರಣ ಪತ್ರಿಕೆಯಲ್ಲಿ ವರನಟ ರಾಜಕುಮಾರರನ್ನು, ಮಹಾತ್ಮಗಾಂಧಿಜೀಯವರನ್ನು, ತುಮಕೂರಿನ ಸಿದ್ದಗಂಗಮಠದ ಶ್ರೀ ಶಿವಕುಮಾರಸ್ವಾಮೀಯವರನ್ನು ಹಾಗೂ ತಮ್ಮಗುರುಗಳಾದ ಶ್ರೀ ಎಸ್. ವೈ. ಹಳಿಂಗಳಿ (ಬಿಜಾಪುರದ ಕೆ. ಇ. ಎಸ್. ಅಧಿಕಾರಿ) ಇವರಗಳನ್ನು ಕೃತಜ್ಞತಾಪೂರ್ವಕವಾಗಿ ಸ್ಮರಿಸಿಕೊಂಡು, ರಾಜಕುಮಾರರವರ ವ್ಯಕ್ತಿತ್ವ ಹಾಗೂ ಅವರ ಜೀವನ ಜೀವನ ದರ್ಶನವನ್ನು ಮಹಾತ್ಮ ಗಾಂಧೀಜೀಯವರ ಹೋಲಿಕೆಯೊಂದಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ.




ತಮ್ಮ ವಿವಾಹಕ್ಕೆ ಆಹ್ವಾನಿಸುತ್ತಿದ್ದಾರೆ.
ಇಂತಹ ಡಾ|| ರಾಜ್ ಅಭಿಮಾನಿಯು ಅಪರೂಪದಲ್ಲಿ ಅಪರೂಪ.
ಇವರ ವೈವಾಹಿಕ ಜೀವನ ಸುಖಕರವಾಗಿರಲೆಂದು ಹಾರೈಸೋಣ.

ಅಭಿಮಾನಿಯ ವಿಳಾಸ :
ನಿಜಲಿಂಗಯ್ಯ ಎಸ್.  ಹೆಚ್. (ರಾಜಸುತ)
ಶಿಕ್ಷಕರು
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ,
ಕಮಲದಿನ್ನಿ (ಪೋ) ನವಲಿ (ವಯ ರೋಡಲ್ ಬಂಡ್)
ತಾ|| ಲಿಂಗಸಗೂರು, ಜಿ||  ರಾಯಚೂರು
ಮೊ. : 9964050801

ರಾಜು ವಿನಯ್ ದಾವಣಗೆರೆ.